ಚಿಟ್ಟೆಯ ಕಥೆ

ಣ್ಣ ಬಣ್ಣದ ಚಿಟ್ಟೆ
ಸೊಗಸಾದ ಚಿಟ್ಟೆ
ಹೂವಿಂದ ಹೂವಿಗೆ
ಹಾರುವ ಚಿಟ್ಟೆ

ಕಾಮನಾ ಬಿಲ್ಲನ್ನು
ತಾಕಿ ಬಂದೆಯ ನೀನು
ಎಲ್ಲಿಂದ ಬಂದಿರುವೆ
ಹೇಳೆಯಾ ಚಿಟ್ಟೆ

ನನಗೇನು ಗೊತ್ತಿಲ್ಲ
ನಾನೇನು ಕಾಣೆ

ಸಣ್ಣ ಮೊಟ್ಟೆ ಒಡೆದು
ಪುಟ್ಟ ಹುಳುವಾಗಿ
ಗಿಡದಲ್ಲಿ ಎಲೆ ತಿಂದು
ಮಲಗಿಬಿಟ್ಟಿದ್ದೆ

ಎದ್ದು ಕಂಡರೆ ಸುತ್ತ
ಚೀಲ ಒಂದಿತ್ತು
ಒದರಿ ಬಂದೆ
ನಾನು ಚಿಟ್ಟೆಯಾಗಿದ್ದೆ

updatedupdated2024-12-102024-12-10